Saturday, October 25, 2014

ಖಾರ ಸ್ವಲ್ಪ ಜಾಸ್ತಿ ... ಸ್ವೀಟಲ್ಲಿ ಇಲ್ಲ ಮಸ್ತಿ....

ಭಟ್ರೆ ಖಾರ ಸ್ವಲ್ಪ ಜಾಸ್ತಿ ...
ಸ್ವೀಟಲ್ಲಿ ಇಲ್ಲ ಮಸ್ತಿ....

ಮಸಾಲಪುರಿ ಕೊಳ್ಳಲು ನಿಂತಿದ್ದೆ. ಅವನ ಅಟ್ರ್ಯಾಕ್ಟಿವ್ ವಾಯ್ಸ್ ತೇಲಿ ಬಂತು. ಅಷ್ಟರಲ್ಲಿ ಭಟ್ರು ನನ್ನ ವೆರಿ ಸ್ವೀಟ್ ಆಂಡ್ ಹಾಟ್ ಮಸಾಲಪುರಿ ತಟ್ಟೆಯನ್ನ ಕೈಗಿಟ್ಟಿದ್ದರು. ಎತ್ಕೊಂಡು ಒಂದೆಡೆ ಕುಳಿತೆ. ಅವನು ಯಾರೆಂದು ನೋಡಲು ಹೋಗಲಿಲ್ಲ... ಅವನೂ ಅವನ ಪ್ಲೇಟಿನೊಂದಿಗೆ ಬಂದ. ಸುತ್ತೆಲ್ಲಾ ಜಾಗವಿದ್ದರೂ ನನ್ನೊಂದಿಗೆ ಕೂತ. ನನಗೆ ಮೈ ಉರಿದಂತಾಯ್ತು. ಇಷ್ಟು ಜಾಗವಿದ್ದರೂ ನನ್ನ ಬಳಿಯೇ ಇವನಿಗೆ ಕೂರಬೇಕೇ? ಸುಮ್ಮನಿದ್ದೆ. ನನ್ನ ಪ್ಲೇಟ್ ಖಾಲಿಯಾಗುತ್ತಾ ಬಂತು. ಅವನದ್ದೂ... ಇಬ್ಬರೂ ಒಟ್ಟೊಟ್ಟಿಗೆ ಎದ್ದು ನಿಂತೆವುಮೆಲ್ಲನೆ ಅಲ್ಲೇ ಇದ್ದ ಗಲ್ಲಾ ಬಳಿ ನಡೆದೆವುಬಿಲ್ ಕೊಡಲು ಪರ್ಸಿಗೆ ಕೈ ಹಾಕಿದೆ. ಆದರೆ ನನ್ನ ಕೈಮೀರಿ ಹೋಗಿತ್ತು, ಅವನ ಕೈ ಗಲ್ಲಾಪೆಟ್ಟಿಗೆಯ ಮೇಲಿತ್ತು. ಕೈಯಲ್ಲಿ ನೂರರ ನೋಟಿತ್ತು. ಮಸಾಲಪುರಿ ಅಂದ. ಭಟ್ರು ದುಡ್ಡು ತಗೊಂಡ್ರು. ನಾನೂ ಕೊಟ್ಟೆ. ಅದನ್ನೂ ತಗೊಂಡ್ರೂ. ಅವನು ಎರಡು ಪ್ಲೇಟ್ ನದ್ದೂ ಪಾವತಿಸಿದ ಮೇಲೆ ನಾನ್ಯಾಕೆ ಪಾವತಿಸಿದೆ ಅಂದ್ಕೊಂಡ್ರಾ..  ಅಯ್ಯೋ  ಅವನು ಪ್ಲೇಟ್  ತಿಂದಿದ್ದ. ಅದಕ್ಕೆ ಕೊಟ್ಟ, ನನ್ನದು ನಾನು ಕೊಟ್ಟೆ. ಸಿಂಪಲ್.

ಅಂಗಡಿಯಿಂದ ಹೊರಬಿದ್ದೆವು. ಜೋರು ಮಳೆ. ನನ್ನ ಕೈಯಲ್ಲಿ ಇಬ್ಬರು ಹೋಗುವಂತಹ ಕೊಡೆ ಇತ್ತು. ಅವನ ಕೈ ಖಾಲಿ. ಅವನು ಒಮ್ಮೆ ನೋಡಿದ. ನಾನು ನೋಡದಂತೆ ಮಾಡಿ ಸೀದ ಹೋದೆ. ಅವನು ಛಲಗಾರ ಕೊಡೆಯಿಲ್ಲದೆ ಮಳೆಗಿಳಿದ. ಮಳೆ ನೀರೆಲ್ಲಾ ಬೀಳುತ್ತಿತ್ತು. ಅವನ ಮೇಲಲ್ಲ.. ಅವನ ಮೇಲಿದ್ದ ರೈನ್ ಕೋಟ್ ಮೇಲೆ... ಕೊಡೆ ಇಲ್ಲ ಅಂದೆ ರೈನ್ ಕೋಟ್ ಇಲ್ಲ ಅಂದ್ನಾ.. ಇಬ್ಬರೂ ಹೊರಟೆವು ಒಂದೇ ಕಡೆಗೆ. ಒಂದು ಚೂರೂ ಮಾತುಕತೆಯಿಲ್ಲ, ಅವನ  ಮುಖ ಕೂಡಾ ನೋಡಲಿಲ್ಲ... ಅಷ್ಟರಲ್ಲಿ ನನ್ನ ತಿರುವು ಬಂತು. ನಾನು ತಿರುಗಿದೆ ತಿರುಗಿ ನೋಡದೆ. ಅವನು ತಿರುಗಲಿಲ್ಲ. ಏಕೆಂದರೆ ಅವನ ತಿರುವು ಬಂದಿರಲಿಲ್ಲ. ನೇರ ಹೋದ ಅವ. ಅವನ ದಾರಿ ಅವನಿಗೆ, ನನ್ನ ದಾರಿ ನನಗಾಯ್ತು.

ಇಷ್ಟೇ... ಮುಗೀತು.

ಅಯ್ಯೋ....ಇದು ಒಂದು ಕಥೆನಾ.. ಲವ್ ಇಲ್ಲ, ಡೈಲಾಗ್ ಇಲ್ಲ, ಹುಡುಗ ಹುಡುಗಿ ಮುಖಾನೂ ನೋಡಿಲ್ಲ, ಅವಳು ಅವನಿಗೆ ಕೊಡೆ ಹಿಡಿಯಲಿಲ್ಲ, ಮಳೆಗೆ ತೋಳು ತಾಕುತ್ತಾ ನಡೆಯಲಿಲ್ಲ, ಮೈಲುಗಲ್ಲಿನವರೆಗೆ ಜೊತೆಗಿದ್ದವಳನ್ನು ಮದುವೆಯೂ ಆಗಲಿಲ್ಲ.. ಏನ್ ಇದೆ ಇದರಲ್ಲಿ.. ಕರ್ಮ ಸುಮ್ನೆ ಟೈಮ್ ವೇಸ್ಟ್ ಅಂತ ಬೈತಿದೀರಾ?

ಹಲೋ ಹಲೋ.. ಇಷ್ಟೆಲ್ಲಾ ಆಗೋಕೆ ನಾ ಹೋಗಿದ್ದು ಕಾಮತರ ಅಂಗಡಿಗಲ್ಲ, ಅದೂ ಉಡುಪಿಯ ಕಾಮತರ ಮಸಾಲಪುರಿ ಅಂಗಡಿಗಲ್ಲ. ಗುರುತು ಪರಿಚಯವಿಲ್ಲದ ಹುಡುಗನ ಜೊತೆ ಮಾತನಾಡಲು. ಅವನಿಗೆ ಕೊಡೆ ಹಿಡಿಯಲು ನಾನು ಅವನಲ್ಲ... ಮೈ ತುಂಬಾ ರೈನ್ ಕೋಟ್ ಹರಡಿಕೊಂಡವನನ್ನು ಏನೂಂತ ಟಚ್ ಮಾಡ್ಲಿ.. ಅವನಿಗೆ ಮಸಾಲಪುರಿ ಸ್ಟಾಲ್ ನಲ್ಲಿ ಕಂಡ ಹುಡುಗಿ ಜೊತೆ ಲವ್ ಆಯ್ತು ಅಂತಾ ನನ್ಗೂ ಆಗ್ಬೇಕಾ.. ಸರಿ ಹೋಯ್ತ್ರಿ ನಿಮ್ ಕತೆ.. ನಾನೇ ಬೇರೆ ನನ್ ಸ್ಟೈಲೇ ಬೇರೆ.....


* - ಪದ್ಮಿನಿ ಜೈನ್ ಎಸ್ .

No comments:

Post a Comment