Wednesday, November 12, 2014

ಕಪ್ಪು ಸುಂದರಿ .......

          ನಾನೊಬ್ಬಳು ಸುಂದರಿ .. ಎಲ್ಲರೂ ನಾನು ಕಪ್ಪೆಂದು ಅಪಹಾಸ್ಯ ಮಾಡುವರು .... ಅವ್ರಿಗೇನು ಗೊತ್ತು ಕಣ್ಣು ಕಪ್ಪಿಂದ ಕೂಡಿದರೆ ಮಾತ್ರ ಉಪಯುಕ್ತ .......... ಪಕ್ಕದ ಗೂಡಿನ ಸುಂದರಿ ಗಿಳಿಯವ್ವ ನನ್ನ ಮಗಳನ್ನು ಚುಡಾಯಿಸಿದಳುನೀನು ಅಪಶಕುನಎಂದು ... “ನಿನ್ನ ಕೂಗು ಕರ್ಕಶಎಂದು ... ಅವ್ಳಿಗೇನು ಗೊತ್ತು ಅವಳ ಕೂಗು ಮಧುರವಾದದ್ದು ನನ್ನ ಕರ್ಕಶದ ಹೋಲಿಕೆ ಇಂದಾನೆ ಅಂತ....
ಎಲ್ಲರಿಗೂ ನಮ್ಮೇಲೆ ಹೊಟ್ಟೆ ಉರಿ ... ನಮ್ಮ ಸಂತತಿ ಜಾಸ್ತಿ ಎಂದು .... ಏನ್ ಮಾಡ್ಲಿ ಸ್ವಾಮಿ  ನಾನಂತೂ ಇಂಜಿನಿಯರ್ ಅಲ್ಲ ಮನೆ ಕಟ್ಟೋಕೆ ... ನನ್ನ ಬಾಣಂತಿಕೆ ಆಚೆ ಮಾವಿನ ಮರದ ಕೋಗಿಲೆ ಅಕ್ಕನ ಮನೇಲಿ ಆಗುತ್ತೆ ... ಅಲ್ಲಿ ಮಕ್ಳು ಹುಟ್ಟಿ ಬೆಳೀತಾರೆ ... ನೀವೇ ಹೇಳಿ ಮಾತಾಡೋಕೆ ಕಲಿತ ಕೂಡ್ಲೇ ಯಾವ ಪುಟ್ಟ ಕಂದಮ್ಮನೂ ಹಾರೋದಿಲ್ಲ... ಆದ್ರೆ ನನ್ನ ಮಕ್ಳು ಹಾರ್ತಾರೆ ... ಕಷ್ಟದಲ್ಲಿ ಜೀವನ ಏನೆಂದು ಕಲಿತಾರೆ ...  ಧಮ್ಮಿದ್ದಷ್ಟು ಜೀವಿಸ್ತಾರೆ ...... ನಾವೆಲ್ಲೂ ವಲಸೆ ಹೋಗುವವರಲ್ಲ .. ನಮ್ ತಾಯಿ ಮಣ್ಣನ್  ಗೌರವಿಸುವಂತ ಜಂತುಗಳು ನಾವು ... ಒಗ್ಗಟ್ಟಿಗೆ ಉದಾಹರಣೆ ನಾವು ಮನು ಜಂತುಗಳಿಗೆ... ಒಂದು ಅಕ್ಕಿಯನ್ನು ನಾವು ಪಾಲು ಮಾಡಿ ತಿನ್ನೋರು. ಮೊದ್ಲು ಅಮ್ಮಂಗೆ ಮತ್ತೆ ಮಕ್ಳಿಗೆ ಅದ್ರ ಪಾಲು ಮರಿ ಮಕ್ಳಿಗೆ .
         
          ....ಚೇ ಗಿಡುಗ ಅಂದ್ರೆ ಉಚ್ಚೇ ಹೊಯ್ಯುವ  ಪಕ್ಷಿ ಜಂತುಗಳು ನಮ್ಮನ್ನ ನೋಡಿ ಕಲೀಬೇಕು . ನಾವು ಗುಂಪಾಗಿ ಹೋದ್ರೆ ನಾವೇ ರೌಡಿ ರಾಥೋಡ್, ನಾವೇ ಏಕ್ ವಿಲನ್.
        
         ಹೌದು ಸ್ವಾಮಿ ನಾವು ಕಪ್ಪು ನಮ್ಮ ಧ್ವನಿ ಕರ್ಕಶ ... ಆದ್ರೆ ನಮ್ ದಾರಿಗೆ ಅಡ್ಡಗಾಲಿಟ್ರೆ ನಾವು ಜವಾಬ್ದಾರರಲ್ಲ ನಿಮ್ ಕಾಲಿಗೆ ....

    
* - ಮುರಳಿ ಕೃಷ್ಣ.                            

No comments:

Post a Comment